ಚೆಂದ

ಚೆಂದುಳ್ಳಿ ಬಂಗಾರಿ ಬಂದಿಹಳು ಸಿಂಗಾರಿ ಮಡಿಲಲ್ಲಿ 

ಹಾಲ್ಬಾಯಿಯ ತಿಳಿಗಣ್ಣಿನ ಅಂದಗಿ ಬಂದಿಹೆ ನೀ 
ಬೆಳ್ಬಾನಲಿ ನಲ್ನೇಸರು ಮೂಡುವೊಲು ಹೊಳಪಿಂದಲೀ
ಚೆಂದುಳ್ಳಿ ಬಂಗಾರಿ ಬಂದಿಹೆನೀ ಸಿಂಗಾರಿ ಮಡಿಲಲ್ಲಿ 

ಎವೆಯಿಕ್ಕುತ ಪಿಳಿದಿಹವು ಚೆನ್ಗಂಗಳು ಹಾಲ್ನೋಟದೆ
ಹಲ್ಲಿಲ್ಲದ ಜೊಲ್ಬಾಯಿಯ ಶೃತಿಬದ್ಧ ಸಂಗೀತದೆ 
ಚೆಂದುಳ್ಳಿ ಬಂಗಾರಿ ಬಂದಿಹಳು ಸಿಂಗಾರಿ ಮಡಿಲಲ್ಲಿ 

ಪುಟಿದೇಳುತಿಹವು ಕೈಗಳು ಬಾಚಲು ಬಾನನ್ನು 
ನಿಲ್ಲಲರಿಯದ ಕಾಲ್ಗಳು ಕೊಳ್ಳಲು ನಾಡ್ನಾಡನ್ನು 
ಚೆಂದುಳ್ಳಿ ಬಂಗಾರಿ  ಬಂದಿಹಳು ಸಿಂಗಾರಿ ಮಡಿಲಲ್ಲಿ 

ನಡುಗಿದವು ಕೈಗಳು ನರುಗಂಪಿಸೋ ಮೈಸೋಂಕು  
ಮೊದಲನೆಯ ಮುಲುಮೆಯಿದು ಕೈಗಳಿಗೆ ಬಾಳ್ಪೋಕು 
 ಚೆಂದುಳ್ಳಿ ಬಂಗಾರಿ  ಬಂದಿಹಳು ಸಿಂಗಾರಿ ಮಡಿಲಲ್ಲಿ

ತುಂಬಿಹವು ತಾಯ್ಗಂಗಳು ಸಿಹಿದುಂಬಿದ ಬಾಳ್ನೋಟಕೆ 
ಹಲುಬಿಹಳು ನಿನ್ನೊಲುಮೆಯ ತಿಳಿನಂಟಿನ ಚೆಂಗಾಟಕೆ 
ಚೆಂದುಳ್ಳಿ ಬಂಗಾರಿ ಬಂದಿಹಳು ಸಿಂಗಾರಿ ಮಡಿಲಲ್ಲಿ 

ತಾಯ್ಗನ್ನಡತಿ ಹಾಡಿಹಳು ಮುಚ್ಚಿಸಲು ನಿನ್ನೆವೆಯನ್ನು  
ಕಾಣಲು ಕೂಡಿ ಮುನ್ನೆಲೆಯ ಸೊಬಗ ಹೊಂಗನಸನ್ನು  
ಚೆಂದುಳ್ಳಿ ಬಂಗಾರಿ ಬಂದಿಹಳು ಸಿಂಗಾರಿ ಮಡಿಲಲ್ಲಿ  

- ಗುರುಶಾಂತೇಯ(ನರೇಂದ್ರಪ್ರಭು ಗುರುಸಿದ್ದಪ್ಪ )

gelatiyorvaLa magaLa huttidabbakke baredaddu.

Comments

Popular posts from this blog

Privacy policy for Android apps

ಉಣಲು ಕರೆದಳು

ನಲ್ಲಿ