ಗೆಳತಿ

ಅಂತರಂಗದೆಡೆಯನು ನಲ್ನಡೆಯ ನುಡಿತರಂಗಗೊಳಿಸಿ ನಂಟನಿತ್ತು ಹರಸಿದವಳೇ
ಸುಖಾಂತರಂಗಿ ನಾ ಈಹೊತ್ತು ನಲ್ನುಡಿಯನಲ್ಲದೆ ಬೇರೇನನಿತ್ತು ಹಾರೈಸಲೇ?

ಹೋಲಿಸಲು ಅರ್ಹ ಹೂವದಾವುದಿಹುದು?
ಆದರೂ ಕಾವ ಕಣ್ಣೋಟಕಿದೊಂದು ಕೋಮಲತರದರಿವು ಹೊಸತಹುದು!!
ಕಣ್ಣು ಕಿಸಕಿಸನೆ ನಗುತಲದರಲೆ ಕ್ಷಿತಿಯೆಲ್ಲವನು ತುಂಬಿರುವ ಕಿಮ್ಮಲರ್, 
ಮುಖವು ಮುಸಮುಸನೆ ನೋಟವೊಂದರಲೆ ಕ್ಷತಿಯೆಲ್ಲವ ಕಳೆವ ಹೆಮ್ಮಲರ್,
ಮನವೋ ಹಸಹಸನೆ ನಣ್ಮೆಯಿಂದಲೆ ಜತಿಯೆಲ್ಲವನು ಒಲಿವ ನಿಜಮಲರ್!

ಬಾಡಿ ಸೋತವು ಹೂಗಳು ಕಾವ್ಯಗಳಲಿ ಅವುಗಳೆಡೆಯ ನಷ್ಟಕೆ,
ಮುಂದೆಲ್ಲಕವಿಗಳು ಬಳಸುವರು ನಿನ್ನ ಹೆಸರನ್ನೆ ಕಾವ್ಯಾರ್ಥದ ಅಲಂಕಾರೇಷ್ಟಕೆ!!

-ಗುರುಶಾಂತೇಯ


GelatiyorvaLa huttuhabbada nudikaaNike, bahaLa saalugaLu utpreksheyaagi kandaru, hecchu kammi nanaganisiddu - the most social and congenial yet a conservative Kannadati.

Comments

Popular posts from this blog

Privacy policy for Android apps

ಉಣಲು ಕರೆದಳು

ನಲ್ಲಿ