Posts

Showing posts from 2016

ತರಣಿ

ತರಣಿ ತೋರಿಹನು ಹಳೆಮೈನೆರಗಿನ ಹೊಸ ರೂಪದಲಿ  ಬೆಳಗಿ ಅರಳಿಸಿಹನು ಆಳಾಳಿನ ಒಳಗುಗಳ ಕೆರೆಗಳಲಿ  ಮುನ್ನಡೆಯ ಅರಿವಿನೆಡೆಗೆ ತಲೆದೂಗಲು ಅಮಲಿನಲಿ ನೈದಿಲೆಯ ಸೂಸಲಾಣತಿ ಇತ್ತು ಸುತ್ತಲಿನ ಕಡುಮಬ್ಬಿನಲಿ - ಗುರುಶಾಂತೇಯ - ೧೮ - ೦೭ - ೨೦೧೨  Heege kootkondu aakaasha nodtirbekaadre, wordgala experiment maadiddu - anta kaavya rasa enilla andkotini :P.

ಗೆಳತಿ

ಅಂತರಂಗದೆಡೆಯನು ನಲ್ನಡೆಯ ನುಡಿತರಂಗಗೊಳಿಸಿ ನಂಟನಿತ್ತು ಹರಸಿದವಳೇ ಸುಖಾಂತರಂಗಿ ನಾ ಈಹೊತ್ತು ನಲ್ನುಡಿಯನಲ್ಲದೆ ಬೇರೇನನಿತ್ತು ಹಾರೈಸಲೇ? ಹೋಲಿಸಲು ಅರ್ಹ ಹೂವದಾವುದಿಹುದು? ಆದರೂ ಕಾವ ಕಣ್ಣೋಟಕಿದೊಂದು ಕೋಮಲತರದರಿವು ಹೊಸತಹುದು!! ಕಣ್ಣು ಕಿಸಕಿಸನೆ ನಗುತಲದರಲೆ ಕ್ಷಿತಿಯೆಲ್ಲವನು ತುಂಬಿರುವ ಕಿಮ್ಮಲರ್,  ಮುಖವು ಮುಸಮುಸನೆ ನೋಟವೊಂದರಲೆ ಕ್ಷತಿಯೆಲ್ಲವ ಕಳೆವ ಹೆಮ್ಮಲರ್, ಮನವೋ ಹಸಹಸನೆ ನಣ್ಮೆಯಿಂದಲೆ ಜತಿಯೆಲ್ಲವನು ಒಲಿವ ನಿಜಮಲರ್! ಬಾಡಿ ಸೋತವು ಹೂಗಳು ಕಾವ್ಯಗಳಲಿ ಅವುಗಳೆಡೆಯ ನಷ್ಟಕೆ, ಮುಂದೆಲ್ಲಕವಿಗಳು ಬಳಸುವರು ನಿನ್ನ ಹೆಸರನ್ನೆ ಕಾವ್ಯಾರ್ಥದ ಅಲಂಕಾರೇಷ್ಟಕೆ!! - ಗುರುಶಾಂತೇಯ GelatiyorvaLa huttuhabbada nudikaaNike, bahaLa saalugaLu utpreksheyaagi kandaru, hecchu kammi nanaganisiddu - the most social and congenial yet a conservative Kannadati.

ನನ್ನವಳು

ನನ್ನವಳು ನನ್ನವಳು ನನ್ನವಳು  ಬಣ್ಣಿಸಲು ಬಿಡಿಸಿಹೇಳಲು ನುಡಿಗಳಿಗೆ ನಿಲುಕದವಳು  ನಿಂತು ನೋಡಿತು ಹಂಸೆ ಕೊಳದೊಳಗೆ, ಕಳೆದಮನದಿ  ನಡೆಯುತಿರಲು ನನ್ನವಳು, ಕುರುಡನ ಒಳಕಂಗಳನೂ ಸೆಳೆವ ತೆರದಿ  ಬೆಚ್ಚಿತು ಮೂಗಮುಚ್ಚಿ ಸಿಡಿಶೀನಿಗೆ ಹೆದರಿ ಕೆಂಡಸಂಪಿಗೆಯು, ಅಲ್ಲಿ ಸವಿಚೆಂಗಂಪನು ಬೀರುತಡರಿಸುತ ನನ್ನವಳು ನಲಿದುಬರುವಲ್ಲಿ  ನಾಚಿತು ಅರೆಗಣ್ಣುಮುಚ್ಚಿ ಕೆಂಗುಲಾಬಿಯ, ದಳಜೊಂಪು  ಕಂಡು ತೆರೆದುಳಿದ ಬೆರಗುಗಂಗಳಿಂದ ನನ್ನವಳ ಕೆನ್ನೆಗೆಂಪು  ಹೆದರಿತು ಕೊಳಲು ಕುಳಿಯೊಳೂದಿದ ಸೂಲಿಗೆ, ಸ್ವರವತರಲು   ಕೇಳಿ ತಣಿದು ನನ್ನವಳು ತನಗಿಂತ ಮೆಲ್ಲಿನಿದಾಗಿ ನುಡಿಯುತಿರಲು  ತಲ್ಲಣದಿ ಓಡಿತು ನೇಸರ ಬಚ್ಚಿಟ್ಟುಕೊಳ್ಳಲು, ಮಲೆತಾಯ ಮನೆಯೊಳಗೆ  ನನ್ನವಳ ಮೈಕಾಂತಿ ಮರೆಮಾಚಲು ಅದರ ಬೆಳಕಿನಸೊಬಗ ಹಿರಿಮೆಯಬಗೆ  ಬುಸುಗುಟ್ಟಿ ಮೊರೆದುಕ್ಕಿ ಹರಿದು ಚೆಲ್ಲಿಹೋಯಿತು, ಹಾಲು ಒಳಗಿಚ್ಚಿನಿಂದ ಕಂಡುಕುದಿದು ತನಗಿಂತ ತಿಳಿಯಾದ ನನ್ನವಳ ನಡತೆಯ ಹೆಚ್ಚುಪಾಲು ಹಿಗ್ಗಿತು ಮನವು ಮಾತುಗಳಿಲ್ಲದೆ ಕವಿಬಹುಳದ ಬಾಯಿ, ಮೂಕವಾಯಿತೆಂದೆ! ಅರಿತು ಬಿಮ್ಮನೆ! ನುಡಿಗಳ ಕಿರಿಮೆ ನನ್ನವಳ ಅಂದದ ಮುಂದೆ - ಗುರುಶಾಂತೇಯ

ಚೆಂದ

ಚೆಂದುಳ್ಳಿ ಬಂಗಾರಿ ಬಂದಿಹಳು ಸಿಂಗಾರಿ ಮಡಿಲಲ್ಲಿ  ಹಾಲ್ಬಾಯಿಯ ತಿಳಿಗಣ್ಣಿನ ಅಂದಗಿ ಬಂದಿಹೆ ನೀ  ಬೆಳ್ಬಾನಲಿ ನಲ್ನೇಸರು ಮೂಡುವೊಲು ಹೊಳಪಿಂದಲೀ ಚೆಂದುಳ್ಳಿ ಬಂಗಾರಿ ಬಂದಿಹೆನೀ ಸಿಂಗಾರಿ ಮಡಿಲಲ್ಲಿ  ಎವೆಯಿಕ್ಕುತ ಪಿಳಿದಿಹವು ಚೆನ್ಗಂಗಳು ಹಾಲ್ನೋಟದೆ ಹಲ್ಲಿಲ್ಲದ ಜೊಲ್ಬಾಯಿಯ ಶೃತಿಬದ್ಧ ಸಂಗೀತದೆ  ಚೆಂದುಳ್ಳಿ ಬಂಗಾರಿ ಬಂದಿಹಳು ಸಿಂಗಾರಿ ಮಡಿಲಲ್ಲಿ  ಪುಟಿದೇಳುತಿಹವು ಕೈಗಳು ಬಾಚಲು ಬಾನನ್ನು  ನಿಲ್ಲಲರಿಯದ ಕಾಲ್ಗಳು ಕೊಳ್ಳಲು ನಾಡ್ನಾಡನ್ನು  ಚೆಂದುಳ್ಳಿ ಬಂಗಾರಿ  ಬಂದಿಹಳು ಸಿಂಗಾರಿ ಮಡಿಲಲ್ಲಿ  ನಡುಗಿದವು ಕೈಗಳು ನರುಗಂಪಿಸೋ ಮೈಸೋಂಕು   ಮೊದಲನೆಯ ಮುಲುಮೆಯಿದು ಕೈಗಳಿಗೆ ಬಾಳ್ಪೋಕು   ಚೆಂದುಳ್ಳಿ ಬಂಗಾರಿ  ಬಂದಿಹಳು ಸಿಂಗಾರಿ ಮಡಿಲಲ್ಲಿ ತುಂಬಿಹವು ತಾಯ್ಗಂಗಳು ಸಿಹಿದುಂಬಿದ ಬಾಳ್ನೋಟಕೆ  ಹಲುಬಿಹಳು ನಿನ್ನೊಲುಮೆಯ ತಿಳಿನಂಟಿನ ಚೆಂಗಾಟಕೆ  ಚೆಂದುಳ್ಳಿ ಬಂಗಾರಿ ಬಂದಿಹಳು ಸಿಂಗಾರಿ ಮಡಿಲಲ್ಲಿ  ತಾಯ್ಗನ್ನಡತಿ ಹಾಡಿಹಳು ಮುಚ್ಚಿಸಲು ನಿನ್ನೆವೆಯನ್ನು   ಕಾಣಲು ಕೂಡಿ ಮುನ್ನೆಲೆಯ ಸೊಬಗ ಹೊಂಗನಸನ್ನು   ಚೆಂದುಳ್ಳಿ ಬಂಗಾರಿ ಬಂದಿಹಳು ಸಿಂಗಾರ...

ಮಳೆ

ಹೇ ಮಳೆಯೇ! ಯೇಕಿನ್ತು ನಾಚುತಿಹೆ? ಬಸವಳಿದು ಬೆನ್ದಿಹುದು ನಿನ್ನ ತಾಯೊಡಲೆ | ಅಹುದು ಪುರುಳೇ! ಇಂದು ನೀನಿರುವುದು ಎಲ್ಲರಿಗೂ ನಿಳುಕದಾ ನೆಲೆ | ಮರೆಯದಿರು ಒಂದೊಮ್ಮೆ ಇದ್ದುದಂ ನೀ ಎಲ್ಲರೊಳೆ, ಎಲ್ಲರೆಡೆ, ಎಲ್ಲರಾ ಕೀಳೆ | ಇಂದು ನೋಡುತಿಹೆ ತೂರಿ ಎಲ್ಲರ ತನ್ನರಿವ ಮೇಲ್ಮೆಯಾಸೆಲೆ| ಏಕೆಂದು ಅರಿಯದೆ! ಕುರುಹು ತೋರುತಿರುವುದು ನಿನ್ನಳಲೇ?, ನಮ್ಮಳಲೇ? - ಗುರುಶಾಂತೇಯ Maleyanna bhUtaayiya naanmege - ahambhaavakke holisi baredaddu.

ಮೊದಲ ಕವಿತೆ

ಮೂಗುಬೊಟ್ಟಾಗಿ ಹುಟ್ಟಿದ್ದರೆ ನಾನಿವಳ ಮೂಗಿನಲ್ಲಿರಬಹುದಿತ್ತು | ಕಣ್ಣು ಕಪ್ಪಾಗಿದ್ದರೆ ಕಣ್ಣಂಚಿನ ಆರ್ದ್ರತೆಯಾಗಿರಬಹುದಿತ್ತು | ಬಣ್ಣವಾಗಿದ್ದರೆ ತುಟಿಯಂಚಿನ ಸಿಹಿಯಾಗಬಹುದಿತ್ತು | ಕನಿಷ್ಠ ಕಾಲ್ಗೆಜ್ಜೆಯಾಗಿದ್ದರೆ; ನನ್ನೊಡತಿಯ ನಡೆಸಪ್ಪಳವಾಗಿರಬಹುದಿತ್ತು |.. ಹೇ ವಿಧಿಯೇ ಏಕೆ ಹೀಗೆ ವಿರಹಿ ಗಂಡಾಗಿಸಿದೆ? - ಗುರುಶಾಂತೇಯ Gottalla!!!, eLe vayassu, eneno ansiratte, geechirtini.

ಗೆಳತಿ

ಮನದ ಮಾತಿನ ಮಾಲೆಯನು ಮದನೆಗೆ ಮುಡಿಸಿ ಮೊರೆಯಿಡುತಿರೆ  ಮೊರೆಯ ಮನ್ನಿಸಿ ಮನಮಾಡಿ ಮನದನ್ನೆ, ಮೌನವನು ಮುರಿಯುತಿರೆ ,   ಮುರಿದೆನ್ನ ಮ್ಲಾನ ಮನಸಿನೊಳು ಮಲರರಳಿ ಮುದತುಂಬಿ ಮೆರೆಯುತಿರೆ,  ಮೆರೆದು ಮಾಣವನ ಮನದಿ ಮನೆಮಾಡಿ, ಮಣಿಸುತಿರೆ - ಮಾರ್ದವದ ಮಾಣಿಕ್ಯಸಾರೆ. - ಗುರುಶಾಂತೇಯ Heege, sumne kootaaglella, nammuDugi bagge eneno anstiratte.

ಗೆಳತಿ

ಕವನ ಬರೆಯುವ ನೆಪದಿ ಹಾಳೆಯ ತೆರೆದಿಟ್ಟು ಕೂತೆ ಎಷ್ಟು ಯೋಚಿಸಿದರೂ ಪದವೊಂದೂ ಸಿಗದೆ ಸೋತೆ ಹೋಲಿಕೆಗೆ ಸಿಗದ ಉಪಮೆ ನೀನು ಬಣ್ಣಿಸಲು ಬರದ ರೂಪಕ ನೀನು ಹೊಗಳಹೋಗಲು ಉತ್ಪ್ರೇಕ್ಷೆಗೂ ಉತ್ಪ್ರೇಕ್ಷೆ  ನೀನು ಮನದ ನುಡಿಯಿದು ಕೂಗುತಿದೆ ಆಲಿಸು,ಹೇಳಲು ಬರುತಿಲ್ಲ ಈ ಪರಿಯ!!! - ಗುರುಶಾಂತೇಯ Helidnalla, kelasa keami illade kootaagallella heege eneno anstiratte.

ನಲ್ಲಿ

ನಲ್ಲಿ, ನೀನಿರುವೆ ಮನೆಮನೆಯ ಕೊಳಾಯಿಗಳಲ್ಲಿ ಕಿತ್ತೊಗೆದು ಹರಿವುದು ನೀರು ನೀನಿಲ್ಲದೆಡೆಗಳಲ್ಲಿ ಕಿವಿಹಿಂಡಿದರೂ ಸುರಿಸುವೆ ನಿನ್ನನೋವ ಕಣ್ಣೀರ ಧಾರೆ ತೊಳೆದೊಗೆಯಲು ಎಲ್ಲರ ಇಹಕರ್ಮದ ಹುಣ್ಣೆಗಳು ತೀರೆ! ನಿಲುವಿಲ್ಲದೆ ಹರಿದು ಪೋಲಾಗುವ ಜಲಾಪಾತವ ಬಿಗಿಹಿಡಿದು ತಡೆವಶೂರ ಅಳವಿಲ್ಲದೆ ಮೆರೆದು ಗೋಳಾಗುವ ಹರಿಜಾತೆಯ ಕಟ್ಟಿಡಿದ ನೀನೆ ನಿಜ ಗಂಗಾಧರ. -ಗುರುಶಾಂತೇಯ Nanna jeeva-geLeyara gumpondu, nannanna regisoke - rechchigELsoke, obba jagaLaganti (nija! haLLigaLalli eegge sumaaru ondu 10 - 15 varshagaLa hinde nalli neeranna yaaru modalu hidiyodu anta jagaLa maadtidralla!!- ade kiragoorina gayyaLigaLu katheli bartaaralla - aatarahadavre obru - avrge naavugaLu secret-aagi 'nalli' anta hesaritkondidvi), aa jagaLagantina nanage holsi aadkotidru. Heege 2015 ra 'Chirstmas time' alli aavammanna nenskondu ondu kavite baribeku anta obLu kitaapati geLati 'Secret Santa task' kottidlu - aaga maadtini taaLu anta, avlge tirumantra haaki - koLaayi nalli mele ondu kavana barede, adaralli nanna ishta daiva haagu avala ishta-devva vaada ...

ಕರ್ನಾಟ

ಕೊಡವದೊಡವೆಯ ಬಹುಬಿಂಕದಿ ತೊಟ್ಟು ಬ್ಯಾರಿ ಜರಿಸೀರಿಯನುಟ್ಟು ಕೊಂಕಣದ ಘಲ್ಲೆನುವ ಕಿಂಕಿಣಿಯ ಕಾಲ್ಗಟ್ಟು ತುಳುವಿನ ದಂಡಕೋಲನಿಡಿದ ಕೈಗುಟ್ಟು ಕನ್ನಡದ ಸಿರಿವೆತ್ತಿ ಮೈದಳೆದ ನಿಜಹುಟ್ಟು ನೆಲಸೊಬಗ ಡಿಂಡಿಮವು ಮೊಳಗುತಿರಲು ಕರಡಸಿಂಹಳ ನಗಾರಿ ತಮಟೆಗಳಿಗೆ ನಂದಿಧ್ವಜ ಹುಲಿ ವೇಷ ಕುಲಬಹುಳಗಳು ಹೊಗಳಿಹಿಗ್ಗುತಿರಲು ವಾಯುಲೀನ ಮೃದಂಗದೊಡನೆ ವಚನಗಾಯನ ದಾಸಪದ ಘೋಷ ಹಿನ್ನೆಲೆಯಲಿ ತಾಳ ಕಂಸಾಳ ಕೈಸಾಳ ಜಾನಪದ ಗೀಗಿಪದ ಮುನ್ನೆಲೆಯಲಿ ಆಟ ಕೋಲಾಟ ಡೊಳ್ಳಾಟ ಭರತ ಬಯಲಾಟಗಳ ಸಂಪದ ನಡುವಲ್ಲೆ ತಮೋರೂಪಳಾಗಿ ನಿಂತಿಹಳು ರಾಜಸ ಮಂದನಗೆಯಬೀರಿ ಸಾತ್ವಿಕ ಕುಲನಾರಿ ಸ್ವಯಂಗೌರಿ ಐಮೊಗನ ಮಾಯಿ ಆರ್ಮೊಗನ ಆಯಿ ಕರುನಾಡತಾಯಿ - ಕಂಡಿವಳ ಸೊಬಗನಳೆದರಿದು ಮರುಳಾದನು ಮದನಾರಿ!!. - ಗುರುಶಾಂತೇಯ Nanu Samsung alli kelasa maadtirbekaadre, alli Kannadadavru tumba jana idvi. Namdu andre Kannadadavrdu aaga (sumaaru 2012 rinda 2015 ravarege) enikeyalli swalpa melugai gumpu andkolli. Nammavrella seri prati varsha, KannaDa rajyotsava... err!!.. allalla, Karnataka rajyotsavavanna bahu vijRmbhaNeyinda aacharistaa idvi, tumba melmeyinda kondaad'tidvi - heegaagabekaadaromme - 2015 ralli - ide Karnataka rajyotsavada angavaagi kavana spardheyan...