ಹೆಂಡತಿ ಮೇಲೊಂದು ಕವಿತೆ

ಕವಿಯಾಗೊ ಬಯಕೆ ಕೆಲಕವಿತೆಗಳ ಗೀಚಿಸಿದರೂ,
ನಿನ್ನ ಮೇಲೊಂದು ಕವಿವಾಕ್ಯ ಮೂಡದದೇಕೋ?

ನಾನು ನಾನೆಂಬ ಬರಿ ಹಮ್ಮು, ನಾವಾಗಿ ಹಿಗ್ಗಿದುದಕೋ?

ನಾನು ನಾನೆಂಬ ಒಣ ಬಿಮ್ಮು, ನಾವಾಗಿ ಕುಗ್ಗಿದುದಕೋ?
ನಾನುಲಿವ ನುಡಿಸಾರದಲಿ, ನಿನ್ನ ಸಾವಿರ ಭಾವಪುಷ್ಟಿ!
ನಾಕಾಣ್ವ ನೋಟದಿರಿಸಿನಲಿ, ನಿನ್ನ ಸಾವಿರ ಕಾವ್ಯಸೃಷ್ಟಿ!

ನಮಗಾಗಿ ನಾವು ಸೇರಿ ಬಿಟ್ಟುಕೊಟ್ಟ ಬೇಡಗಳಿಗೋ?

ನಮಗಾಗಿ ನಾವು ಸೇರಿ ಕಟ್ಟಿಕೊಂಡ ಬೇಕುಗಳಿಗೋ?
ನಮಗಾಗಿ ನಾವು ಸೇರಿ ಮೈಗೂಡಿಸಿಕೊಂಡ ಬಯಕೆಗಳಿಗೋ?
ನಮಗಾಗಿ ನಾವು ಸೇರಿ ಕಣ್ಗೂಡಿಸಿಕೊಂಡ ಕನಸುಗಳಿಗೋ?

ನಾನು ನಿನಸೇರಿ ನಾವಾಗಿ ನಾನುನೀನೀನಾವಿನ ಬೇರ್ಪಾಡೇನು

ನೀನು ನನಸೇರಿ ನಾವಾದ ತಾನತನನೀಯಾನದ ಸೇರ್ಪಾಡೇನು?
ನಾನು ನಾವಾದಮೇಲೆ ನಾವು ನಾವಿನಮೇಲೇರಿದಮೇಲೆ
ನಾನೆಂಬುದೆಂತು? ನೀನೆಂಬುದೆಂತು? ನಿನಮೇಲೆ ಕಾವ್ಯವೆಂಬುದೆಂತು?
ಅದು ನನ್ನಲ್ಲಿ ಮೂಡುವುದೆಂತು? ಕಾವ ನುಡಿಯಾಗುವುದೆಂತು?
ಅನಂಗಜಾರಿಗನಂಗಳಾದಗಜಳ ಪರಿಯೆಂತು?
ಎಂತು ಎಂತುಗಳ ಗೋಜಿನ ಸಂತೆಯಲಿ ನನಗನಿಸಿದ್ದಂತೂ! ಇಂತು!.


ಗುರುಶಾಂತೇಯ ೧೯-೦೮-೨೦೧೭

Comments

  1. ಇಲ್ಲಿ ಬಳಸಿರುವದ ಬರಿಯ ಕನ್ನಡವಲ್ಲ, ಕನ್ನಡ ಸುಧಾಮೃತ. ಓದಿದಷ್ಟೂ ನಮ್ಮೊಳಗೆ ಸಲಿಲವಾಗಿ ಹರಿಯುತ್ತಲೇ ಇರುತ್ತದೆ.

    ReplyDelete

Post a Comment

Popular posts from this blog

Privacy policy for Android apps

ಉಣಲು ಕರೆದಳು

ನಲ್ಲಿ