ನೈದಿಲೆ

ಮಳೆಯರಸ ಕಾಣಲರಸಿ ಸಾಲುಸಾಲಾಗಿಸೇರಿಸಿ ಹನಿಗಳಕಳುಹಿಸಿ
ಇರುಳರಸ ಮುಗಿಲ್ಸರಿಸಿ ಮೂಲೆಮೂಲೆಯನೆಣಿಸಿ ಹಾಲ್ಬೆಳಕನಿಳಿಸಿ
ಇಬ್ಬರರಸರೊರಸಿ ಗಿರಿಯರಸನೆಳೆಯರಸಿ ಕಿರುನೋಟವನರಸಿ
ಬಗೆಬಗೆಯಲಿಸೆಣಸಿ ಹಗೆಯಡರಿಸಿ ತಾಮೇಲೆನಿಸಿ ನಾಮೇಲೆನಿಸಿ
ನೆಲದರಸಿಯನುನಿಸಿ ತೋಯಿಸಿಮಿನುಗಿಸಿ ಕಂಗಳಕೋರೈಸಿ
ಅಲ್ಲರಸಿ ಇಲ್ಲರಸಿ ಕೊಳದೊಳಗರಸಿ ಚಿಗುರುತಚದುರಿಸಿ
ಬೆರಗಬಡಿಸಿ ಅರಳುವೆಳೆನೈದಿಲೆಯಕಂಡರಸಿ ಮೌನಪಡೆದರು ಕಣ್ದಳಗಳನರಳಿಸಿ
ಇದನೋಡಿದಳು ಹುಸಿಮುನಿಸದೋರಿಸಿ ನಿಜಹರನರಸಿ ಮುಖವಸಿಂಡರಿಸಿ ಒಳಗೊಳಗೆಹರಸಿ.

ಗುರುಶಾಂತೇಯ ೦೮-೦೮-೨೦೧೭

Comments

Popular posts from this blog

Privacy policy for Android apps

ಉಣಲು ಕರೆದಳು

ನಲ್ಲಿ