ಮಗಳು
ಬಾಂದಳದ ಬಂಗಾರಿ ಅಂದಗಳ ಎಳೆಗೌರಿ ಮುಗಿಲ್ಮರೆಯ ಸಿಂಧೂರಿ ಜೊಲ್ಬಾಯ ಸಿಂಗಾರಿ ಕಿಲನಗೆಯ ಚಿನ್ನಾರಿ ಬಗೆಬಗೆಯ ನಟದೋರಿ ಹುಸಿದಳುವ ಎಣೆಯೂರಿ ನಗುಪಡೆವ ಹಠಮಾರಿ ತಾಯ್ಮಡಿಲ ದೇವೀರಿ ಚಂದನದ ನನೆಸಾರಿ ಕಾಣ್ವರಿಗೆ!! ತುಂಬಿದಳು ಕಣ್ವಾರಿ.
ಇಂಗಳದ ಹೊಳಪವಳು ತಿಂಗಳಿನ ಮೆರುಪವಳು ಮಂಗಳನ ಸೆಳೆವವಳು ಮೂಡಣದ ರತಿಯಿವಳು ನಡುವಣದ ಉರಿಯಿವಳು ಪಡುವಣದ ತಂಪಿವಳು ಅನಂಗನುರಿದವನರೆಯಂಗವಿವಳು ಕೈಮುಗಿದು ಮುದ್ದಾಡು!! ನಿಜಗಿರಿಜೆಯಿವಳು, ಬಾಳ್ಗನಸ ತಿರುಳು ನನ್ನಮುದ್ದುಮಗಳು.
ಪುಟಿದೆದ್ದ ಕನಸೊಂದು ಪುಟವಿಟ್ಟ ನನಸಾಗಿ ಬಟುವಿಟ್ಟ ವರವಾಗಿ ಕಟುನೋವ ಮುಗಿವಾಗಿ ಹಟತೊಟ್ಟು ಮಗಳಾಗಿ
ವಿಟನಂತೆ ಕಂಗಳನು ಪಟಪಟನೆ ಆಡಿಸುತ ಕೋಕಿಟಳಂತೆ ನುಡಿಗಳಲಿ ವಟವಟನೆ ಉಲಿಯುತಲಿ ಚಟಬದ್ಧ ಕಾಲ್ಗಳನು ಲಟಲಟನೆ ಗಾಳಿಯಲಿ ತುಟತುಟನೆ ಓಡಿಸುತ ತುಟುಗರೆವ ಕೈಗಳಲಿ ಹಾಲ್ದುಟಿಗಳನು ಸಾವರಿಸಿ ಮಲಗಿದ್ದು ನಟನಾಟ್ಯ ಬಹುವಿಧದಿ ಆಟದಲಿ ಮುಳುಗಿರುವ ನಟರಾಜ ಮಗುವಾಗಿ.
ಗುರುಶಾಂತೇಯ
೧೦-೦೮-೨೦೧೭

ತಾಂತ್ರಿಕ ಶಿಕ್ಷಣ ಪಡೆದರೂ, ಅದರೊಳಗೆ ಕನ್ನಡ ಪ್ರೀತಿಗೆ ನೀರೆರೆದು ಬೆಳೆಸಿರುವ ಬಗೆ ಅತ್ಯದ್ಭುತ. ಇಂತಹ ಅಮೋಘ ಸೊಗಡಿನ ಕನ್ನಡವನ್ನು ಈ ತಲೆಮಾರವರಲ್ಲಿ ನಾನೆಲ್ಲೂ ಕಂಡಿಲ್ಲ. ನೀವು ಬರೆಯುವುದರಲ್ಲೂ ನಿಮ್ಮದೇ ಶೈಲಿ ಸ್ವತಂತ್ರವಾಗಿದೆ. ನೀವು ಬರೆದಷ್ಟೂ ಖುಷಿ ನನಗೆ.
ReplyDeleteಎಲ್ಲಾ ಹಿರಿಯರು ಹಿಂದಿನವರು ಬಿತ್ತಿ, ಬೆಳೆದು, ಕುಯಿಲುಮಾಡಿ, ಬಡಿದು, ಕೇರಿ, ಆರಿಸಿ, ಶೋಧಿಸಿ, ಕುದಿಸಿ, ಬೇಯಿಸಿ ಬಡಿಸಿಟ್ಟ ಉಣವುಂಡು ಬಂದ ತೇಗಿನಂತವು... ಎಲ್ಲ ಅವರಿಗೆ ಸೇರಿದ್ದು.
Delete