ಬಾಯ್ಚಪಲ
ಹುಳಿಯುಂಟು ಸಿಹಿಯುಂಟು ಖಾರದೊಗರುಂಟು
ನೀರೂರುವ ಬಾಯಿಚಪಲದ ಜೊಲ್ಲಿನಂಟುಂಟು
ಕುರುಮಿಸುವೀ ತಿಂಡಿಯ ತಿನಲು ಬರುವವರುಂಟು
ಬಂದವರು ಲೊಟ್ಟೆಯಿಡಿಸುವೀ ತಿನಿಸ ಬೇಡಿದುದುಂಟು
ಬೇಡುವಭರದಿ ಬೇಡದಾಚಾರದಾಚಾರಿಗಳಾದದ್ದುಂಟು
ಅಣ್ಣ-ಬಯ್ಯ-ನಾದುದುಂಟು
ಹುಳಿನೀರು-ಪಾನಿ-ಯಾದಂತುಂಟು
ಕೊಡಿ-ದೋ-ಆದದ್ದುಂಟು
ಸುರಮಿಸಿತು ಬಾಯ್ಸವಿಯ ತಿಂಟು ತಿನ್ನುವ ಆ ಹೊತ್ತು,
ವಿರಮಿಸಿತು ತಾಯ್ನುಡಿಯ ನಂಟು ಮರೆಸುವ ಕೆಡುಹೊತ್ತು
ಹೊರಗಿಂದಾಗಮಿಸಿ ನಾಲಗೆಯ ಮೇಲಾಡಿ ಒಳಹೊಕ್ಕು
ಕಸವಾಗಿ ಭವಿ ಜರಜಜಾರನನ್ನಾಗಿಸುವ ಸವಿಯೊಂದು
ಒಳಗಿನಿಂದುದಿಸಿ ನಾಲಗೆಯ ಮೇಲಾಡಿ ಹೊರಪೊಕ್ಕು
ರಸವಾಗಿ ಕವಿ ಅಜರಾಮರನನ್ನಾಗಿಸುವ ಸವಿಯೊಂದು
ಹೊಟ್ಟೆಹೊರೆಯಲು ಬಂದವನ ಮಾಯ್ನುಡಿಯ
ಭಂಡಜೋರಿನ ಮುಂದೆ
ಹೊಟ್ಟೆಹೊರೆಸಲು ಬಂದವನ ತಾಯ್ನುಡಿಯು
ಮಂಡಿಯೂರಿತು ಅಂದೆ
'ಚೆನ್ನಾ'ಗಿ 'ತೂರ್'ಇ 'ದಾಲ್'ಆಗಿಸಿ ಬೇಳೆಬೇಯಿಸಿಕೊಂಡರು
ಮೆಣಸ ಮಿರ್ಚಾಗಿಸಿ ಅಡಿಯಲ್ಲಿ ಉರಿಯಿಟ್ಟರು, ಬಂದವರು
ಸಾರು ರಸವಿಲ್ಲದ ರಸವಾಗಿ ನಿಸ್ಸಾರವಾಯಿತು
ಕೊತ್ತಂಬರಿ ದನಿಯಿಲ್ಲದ ಧನಿಯಾಯಿತು
ನಮ್ಮವರ ತನ್ಮೆ ನೆಲೆಯಿಲ್ಲದೆ ಮಣ್ಣಾಯಿತು
ನೀರೂರುವ ಬಾಯಿಚಪಲದ ಜೊಲ್ಲಿನಂಟುಂಟು
ಕುರುಮಿಸುವೀ ತಿಂಡಿಯ ತಿನಲು ಬರುವವರುಂಟು
ಬಂದವರು ಲೊಟ್ಟೆಯಿಡಿಸುವೀ ತಿನಿಸ ಬೇಡಿದುದುಂಟು
ಬೇಡುವಭರದಿ ಬೇಡದಾಚಾರದಾಚಾರಿಗಳಾದದ್ದುಂಟು
ಅಣ್ಣ-ಬಯ್ಯ-ನಾದುದುಂಟು
ಹುಳಿನೀರು-ಪಾನಿ-ಯಾದಂತುಂಟು
ಕೊಡಿ-ದೋ-ಆದದ್ದುಂಟು
ಸುರಮಿಸಿತು ಬಾಯ್ಸವಿಯ ತಿಂಟು ತಿನ್ನುವ ಆ ಹೊತ್ತು,
ವಿರಮಿಸಿತು ತಾಯ್ನುಡಿಯ ನಂಟು ಮರೆಸುವ ಕೆಡುಹೊತ್ತು
ಹೊರಗಿಂದಾಗಮಿಸಿ ನಾಲಗೆಯ ಮೇಲಾಡಿ ಒಳಹೊಕ್ಕು
ಕಸವಾಗಿ ಭವಿ ಜರಜಜಾರನನ್ನಾಗಿಸುವ ಸವಿಯೊಂದು
ಒಳಗಿನಿಂದುದಿಸಿ ನಾಲಗೆಯ ಮೇಲಾಡಿ ಹೊರಪೊಕ್ಕು
ರಸವಾಗಿ ಕವಿ ಅಜರಾಮರನನ್ನಾಗಿಸುವ ಸವಿಯೊಂದು
ಹೊಟ್ಟೆಹೊರೆಯಲು ಬಂದವನ ಮಾಯ್ನುಡಿಯ
ಭಂಡಜೋರಿನ ಮುಂದೆ
ಹೊಟ್ಟೆಹೊರೆಸಲು ಬಂದವನ ತಾಯ್ನುಡಿಯು
ಮಂಡಿಯೂರಿತು ಅಂದೆ
'ಚೆನ್ನಾ'ಗಿ 'ತೂರ್'ಇ 'ದಾಲ್'ಆಗಿಸಿ ಬೇಳೆಬೇಯಿಸಿಕೊಂಡರು
ಮೆಣಸ ಮಿರ್ಚಾಗಿಸಿ ಅಡಿಯಲ್ಲಿ ಉರಿಯಿಟ್ಟರು, ಬಂದವರು
ಸಾರು ರಸವಿಲ್ಲದ ರಸವಾಗಿ ನಿಸ್ಸಾರವಾಯಿತು
ಕೊತ್ತಂಬರಿ ದನಿಯಿಲ್ಲದ ಧನಿಯಾಯಿತು
ನಮ್ಮವರ ತನ್ಮೆ ನೆಲೆಯಿಲ್ಲದೆ ಮಣ್ಣಾಯಿತು
Comments
Post a Comment