ಉಣಲು ಕರೆದಳು
ಉಣಲು ಕರೆದಳು, ಹುಟ್ಟಿರುವ ಹುಡುತಿರುವ ಹುಡಲಿರುವ ಅವುಅವೆಲ್ಲದಕೂ ಅದರದರ ಸವಿಯೊಪ್ಪವ ಅನವರತ ಅಡಿಸಿಯುಣಿಸಿದಣಿವಾರಿಸಿಮುಗಿಸಿ ತಿಳಿನಂಟನೆರೆದು ಸೊಗಯಿಸಿದ ನಿಜತಾಯಿ ಹಸಿಧಸಿದು ತನ್ನಮನೆಯವರನ್ ಉಣಲು ಕರೆದಳು
ಹಸಿಕೆಂದಾವರೆಮೊಗದಲ್ಲರಳಿದಿನ್ನೆರಡೆಳೆಬೆಳುದಾವರೆಕಂಗಳ ಬಲುನವಿರದಳದೆವೆಗಳ ತೆರೆಯದೆ, ಕುಳಿತೇಮಲಗಿ ಏಳೇಳುಲೋಕದ ನಡೆಮಾಟವ ಒಳಕಂಗಳಲೇ ಕಂಢರಸಿಯುರಿಸಿಯಾರಿಸುವ ನಿದಿರೆಯಮದಿರೆಯ ಕುಡುಕನನ್ ಉಣಲು ಕರೆದಳು
ಮನೆಯಲಿ ಮನದಲಿ ಸರಸಿಪೂರ್ಣಾನ್ನಳನ್ನಿರಿಸಿಮರೆಸಿ ಕಂಡಕಂಡಲಿ ಬೇಡಿತಿರಿದುಣ್ಣುವನಾಟಕವ ಬೆಸಸಿಯರಿವಿನತಿಳಿವರಡುವ ಸಲುವಾಗಿಸಲಹುವ, ಬಲುಯಿಂಪುನುಡಿವ ಕಡುಗೆಂಪಿನವನ ಬೆಡಗಿನಸೊಬಗ ನೆನೆದುನನೆದುತಣಿದು ಮೆಲುನಗುತಲಿ ಹಸಿಧಸಿದು ಹುಸಿಹುಂಬನನ್ ಉಣಲು ಕರೆದಳು
ಹಣದೊಡತಿಯನಣುಗನಲಿರಿಸಿ ಹಣದೊಡೆಯನಕಾಲ್ಬಳಿನೆಲಸಿ ನೊರೆವಾಲಮರೆಸುವಂದದರಮನೆಯ ತೊರೆದಿರಿಸಿ ಹಾಲಗಡಲನೊರೆಯಲುಕ್ಕಿಧೆಗ್ಗರಳವ ಸಾರಿಸಿಕೂಡಿಸಿ ಗಟಗಟಾಯಿಸಿ ಕುಡಿದೊಣಗಿದಗಂಟಲದಣಿವಾರಿಸಲೆಣಸಿ ಎದಿರೆದಿರಾಗಿಮೊರೆದೂರೂರರ ಕಾಯ್ದಮರುಳನನ್ ಉಣಲು ಕರೆದಳು
ಬಲುಬಿಂಕದ-ಮೂರೂರುರಿದದನು ಮೈಯ್ಯಂಗವೆಲ್ಲೆಡೆಸವರಿಸಿ, ಬಲುಚೆಂದದ-ಮಾರನುರಿದುದನು ಮೇನಿಯಲ್ಲಡರಿಬಳಿಯಿಸಿ ಸುಡುತಿರುವೆಲುಬುತೊಗಲ ನಡುವೆಡೆಯೆಲ್ಲಾ ತನ್ನತಾನವುಸಿಕುಳಿಸಿರಿಸಿ ಮೇಣೂರಲ್ಲೆಲ್ಲಾ ಮೈಯಿಲ್ಲದ ನಿರ್ಮೇನಿಯಾಗಿ ಮೆರೆದಿಹ ಮಾಯಾವಿಯನನ್ ಉಣಲು ಕರೆದಳು

Comments
Post a Comment