ಏಳು
ಏಳು ಮೇಲೇಳು
ಮಲಗಿದುದು ಸಾಕಿನ್ನು ಎದ್ದೇಳು
ಹೊರಳಿಹರು, ನಗುತಲೆಯೆ ಸೊರಗಿ ಬಾಡಿಹರು ಪರವಾದದ ಮಾಯಾರಾಮದಲ್ಲಿ
ಇಂತಿದೆಲ್ಲರ ಪವಡಿಸಿಹ ಒಳಗಿನ ಎದೆನೆಲಕೆ ತನ್ನನಡೆಯ ದೆಸೆಯನಿಟ್ಟು ಮೂಡಣದಿ ಕಣ್ದೆರೆದು ತೆರೆಯಿಸಲೇಳೇಳು
ಬಾಡಿದ ತನ್ನತನದೊಲುಮೆ-ಬಳ್ಳಿಗೆ ನಿನ್ನಕಣ್ಣಿನ ನೋಟದುರಿ ತಾಗಿಸಲೆಂದಿಲ್ಲಿ
ಬತ್ತಿದೆಳೆಗೆ ತಾಕಿ ಜೀವಸೆಳೆಯ ಮರಳಿಸಿ ಹಸಿಯಬಿಸಿಯಾಗಿ ತನ್ನತನವ ಚಿತ್ತೈಸಿ ಚಿಗುರಿಸಲೇಳೇಳು
ನಾಡವರ ನುಡಿಯೊಲುಮೆ ಬಳ್ಳಿಯದು ಬಾಡಿಹುದು ಕಡುಗಪ್ಪಿನ ಕಗ್ಗತ್ತಲಲ್ಲಿ
ತೊಡೆಯಲದನೈ ನುಡಿತೈಜಸದ ಉರಿದುಂಬಿ ಸೂಲ್ಗದಿರೆರೆವ ವಾಙ್ನೇಸರನಂತೇಳು
ಚಿಗುರುನಿಗುರಿ ಬೆಳೆದುಬಾಗಿ ಊರಗಲತಂಪೆರೆವ ತನ್ಮೆಯ ನೆರಳು ಹರಿಸಲೆಲ್ಲೆಲ್ಲಿ
ಅದಾವನವನ ನೆನೆದುನಿದು ಕುಳಿತೆಮಲಗಿರುವ ನಿಜದಹರಿಕೇಶ ಮನದಹರಿಕೇಶನ ಏಳಿಸಲೇಳೇಳು.
ಮೆರಗೆಸೆವ ತನ್ತನದ ತಾಯ್ನುಡಿಯ ಮಾಂಫಲದ ನಿಜಾರಾಮವಿಹುದಿದು ತಾಯ್ನೆಲದಲ್ಲಿ
ಮೆರೆಸು ನುಡಿಯೊಲುಮೆಯಿಂದೆಲ್ಲರ ಮನದೆಲ್ಲಮೂಲೆಯಲಿ ದೃಢಬಿಂಕದಿ ತನ್ನತನವನೇಳೇಳು
ಮುಡಿಯಲವಿತ ತಾಯಮುಡಿಯ ಹಿಡಿದಿಂಡುತಲಿ ಸುರಿಸು ಜೀವ, ಚಿಮುಕಿಸುವಂದದಿ ಪನ್ನೀರನು
ಬಿಲ್ಗೊಡಲಿ ಮುವ್ವೀಟಿಯ ಬೀಸಿಯೆಸೆಯುತಲಿ ಒರಸು ಮೈಯ್ಯ, ನೆಲಗುಡಿಸುವಂದದಿ ಕಗ್ಗಸರನು
ಬಲಗಣ್ಣನೊಮ್ಮೆ ಬಲುಮೆಲ್ಲನೆ ತೆರೆದರುಹುತಲಿ ಹರಿಸು ಉರಿಯ, ಹುರಿದುಂಬುವಂದದಿ ನೇಸರನು
ಎಡಗೈಯ್ಯ ಹಿಡಿಪಿಡಿದ ಮೃಗಬಾಲದಲಿ ಸೂಸು ಹರಸಿ, ತಂಪೆರೆವಂದದಿ ತಂಬೆಲರನು
ತನ್ಮೆಯದುವೆ ಬಲಿತುಮೊಳೆತು ಗಿಡವುಬೆಳದು ಕೊಂಬೆಹರಡಿ ರೆಂಬೆಬಾಗಿ ಮರವುಚದುರಿ ನೆರಳುಚೆಲ್ಲಿ ಮನವುತಣಿದು ತನ್ನತನಕೆ ತನ್ನನಡೆಗೆ ತಾಯನುಡಿಗೆ ನಿಜದೊಲುಮೆಯ ಮೂಡಿಸಲು

Comments
Post a Comment