ಕವಿಬಯಕೆ

ಕವಿಬಯಕೆ

ಕಡುಬಡವ ನಾನು ಕವನಧನದಿ
ಕಡುಗುರುಡ ನಾನು ಕವನವನದಿ
ಕಡುಮೂಗ ನಾನು ಕಾವ್ಯರಾಗದಿ
ಕಡುಗಿವುಡ ನಾನು ಕವಿಮನದಿ

ಕವಿಯಾಗುವ ಆಸೆಯೋ! ಹೇಳತೀರದು
ಕವನಿಸುವ ಪದಗಳೋ! ಒಂದುಬಾರದು
ತಿರುಕನಾ ಕನಸಿದೋ! ಮುಗಿಯಲಾರದು

ಏನು ಬೇಡಲಿ? ಹೇಗೆ ಕೋರಲಿ? 
ಉಸುರಿಸೇ ನುಡಿ ಸೂಲಗಿತ್ತಿ ಮಹಾರಾಯ್ತಿ - 
ವಾಗ್ದೇವಿ ಕವಿನುಡಿಯೊಂದಾದರೂ!!!

Comments

Popular posts from this blog

Privacy policy for Android apps

ಉಣಲು ಕರೆದಳು

ನಲ್ಲಿ